ಮೇ.25ರಿಂದ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಅನಿರ್ದಿಷ್ಟ ಮುಷ್ಕರ ಆರಂಭ.

Spread the love

 

ಮೇ 25ರಿಂದ ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಅನಿರ್ದಿಷ್ಟ ಮುಷ್ಕರ ಆರಂಭ : ಮರಡಿ ಜಂಬಯ್ಯ ನಾಯಕ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ಕನಿಷ್ಠ ವೇತನ ರೂ 36000 ಜಾರಿಗೆ ಆಗ್ರಹಿಸಿ, ನಿವೃತ್ತಿಯವರೆಗೆ ಸೇವಾ ಭದ್ರತೆಗೆ ಮತ್ತು ಸೇವಾ ಖಾಯಾಂಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಮೇ.25ರಿಂದ ಬೆಂಗಳೂರಿನ ಫ್ರೀಡಮ್‌ ಪಾರ್ಕಿನಲ್ಲಿ ಅನಿರ್ದಿಷ್ಟ ಮುಷ್ಕರ ಆರಂಭಿಸಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಮೂರು ತಾಲೂಕುಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಗಳಲ್ಲಿ ಕಳೆದ 15-20 ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ, ಸ್ವಚ್ಛತಾಗಾರರಾಗಿ, ಕಾವಲುಗಾರರಾಗಿ, ಅಟೆಂಡರ್, ಕಂಪ್ಯೂಟರ್ ಅಪರೇಟರ್ , ಡಾಟಾ ಎಂಟ್ರಿ ಅಸಪರೇಟರುಗಳಾಗಿ , ಅತಿಥಿ ಶಿಕ್ಷಕರಾಗಿ ಜೀವನಕ್ಕೆ ಯಾವುದೇ ಭದ್ರತಾ ಇಲ್ಲದೇ ದುಡಿಯುತ್ತಾ ಬಂದಿದ್ದು ತಮಗೆ ಕನಿಷ್ಠ ವೇತನ 36000 ರೂಪಾಯಿಗಳನ್ನು ಕೊಡಬೇಕು, ತಮ್ಮ ನಿವೃತ್ತಿ ಅವಧಿಯವರೆಗೂ ಸೇವಾ ಭದ್ರತೆ ನೀಡಬೇಕು, ಕೆಲಸ ಮಾಡುವ ಸ್ಥಳದಲ್ಲೇ ಖಾಯಂ ಮಾಡಬೇಕು ಹಾಗೂ ತಮ್ಮ ಇತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಆಗ್ರಹಿಸಲು ತಮ್ಮ ಸಂಘಟನೆ ಮೇ 25ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಮುಷ್ಕರ ಆರಂಭಿಸಲಿದೆ ಎಂದು ಹೇಳಿದರು.

ಅನಿರ್ದಿಷ್ಟ ಮುಷ್ಕರದ ಪೂರ್ವಭಾವಿಯಾಗಿ ಇಂದು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಹಗರಿಬೊಮ್ಮನಹಳ್ಳಿ, ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳ ಸಂಘದ ಪದಾಧಿಕಾರಿಗಳ ಸಭೆಯು ಮೇ 25ರಿಂದ ಆರಂಭವಾಗುವ ಅನಿರ್ದಿಷ್ಟ ಮುಷ್ಕರವನ್ನು ಯಶಸ್ವಿಯಾಗಿ ಮಾಡಲು ತೀರ್ಮಾನಿಸಲಾಯಿತು.

ಇದೇ ವೇಳೆ ಸಭೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದ ರಂಗಪ್ಪ ದಾಸರ್, ಜನವಾದಿ ಮಹಿಳಾ ಸಂಘಟನೆಯ ವಿನೋದ ಹಾಗೂ ನೌಕರರ ಒಕ್ಕೂಟದ ರಂಗನಾಥ ಹವಲ್ದಾರ್ ಮಾತನಾಡಿದರು. ಸಭೆಯಲ್ಲಿ ಹೊರಗುತ್ತಿಗೆ ಅಡುಗೆ ಮತ್ತು ಅಡುಗೆ ಸಹಾಯಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *