ರಾಜ್ಯ ಕರಾಟೆ ಶಿಕ್ಷಕರ ಸಂಘ : ಕರಾಟೆ ಮಾಸ್ಟರ್ ಶಿಹಾನ್ ಸುಭಾಷ್ ಮುತ್ಕೂರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧ ಆಯ್ಕೆ.

Spread the love

 

ರಾಜ್ಯ ಕರಾಟೆ ಶಿಕ್ಷಕರ ಸಂಘ : ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಭಾಷ್ ಮುತ್ಕೂರು ಆಯ್ಕೆ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯನಗರ ಜಿಲ್ಲೆಯಿಂದ ಕರಾಟೆ ಮಾಸ್ಟರ್ ಶಿಹಾನ್ ಸುಭಾಷ್ ಮುತ್ಕೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈಚೇಗೆ ಉಡುಪಿಯ ದುರ್ಗಾ ಇಂಟರನ್ಯಾಷನಲ್ ಹೋಟೇಲ್‌ನಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ಮಹಾಸಭೆ ನಡೆಸಲಾಯಿತು. ಸಂಘದ ನಿಯಮಾವಳಿಗಳ ಪ್ರಕಾರ ನಡೆದ ಚುನಾವಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕರಾಟೆ ಶಿಕ್ಷಕರು ಹಾಗೂ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಈ ಮಹಾಸಭೆಯಲ್ಲಿ ಸಂಘದ ಹೊಸ ಕಾರ್ಯಾಕಾರಿ ಸಮಿತಿಗೆ ರಚನೆಯಾಯಿತು. ಪ್ರಮುಖ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಇದೇ ವೇಳೆ ಮಂಗಳೂರಿನ ಮಹಮ್ಮದ್ ನದೀಮ್ ಅಧ್ಯಕ್ಷರಾಗಿ, ಬಳ್ಳಾರಿಯ ಕಟ್ಟೇಸ್ವಾಮಿಯವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ. ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ರಾಜ್ಯದ ಕರಾಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು, ತರಬೇತಿ ಗುಣಮಟ್ಟವನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳಿಗೆ ಕಲಿಕಾ ಉತ್ತೇಜನ ನೀಡುವುದು. ರಾಜ್ಯ ಮಟ್ಟದ ಕ್ರೀಡಾ ಕಾರ್ಯಕ್ರಮಗಳನ್ನು  ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕರಾಟೆ ಮಾಸ್ಟರ್‌ಗಳಾದ ಡಾ.ದಾಸರ ನಾಗರಾಜ, ಹನುಮಂತ, ಆನಂದ, ಕೊಂಡಯ್ಯ ಸೇರಿದಂತೆ ಸಂಘದ ಸದಸ್ಯರು ನೂತನ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *