ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕು ವಿಶ್ವಕರ್ಮ ಸಮಾಜದ ಸಮ್ಮುಖದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಗಾಯತ್ರಿ ಮಹಿಳಾ ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಬಿ. ಕವಿತಾ ಸಿದ್ದಪ್ಪ, ಉಪಾಧ್ಯಕ್ಷರಾಗಿ ಬಿ. ಅಮೃತ ಬಸವರಾಜ, ಕಾರ್ಯದರ್ಶಿಯಾಗಿ ಸರೋಜಾ ವೀರಭದ್ರಪ್ಪ, ಸಹ ಕಾರ್ಯದರ್ಶಿಯಾಗಿ ಮಂಗಳ ವೀರಣ್ಣ ಹಾಗೂ ಖಜಾಂಚಿಯಾಗಿ ಗಿರಿಜಾ ವೀರೇಶ್ ಕಡಲಬಾಳು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಗರತ್ನ ಮಾಲವಿ, ಕಿತ್ನೂರು ದೇವಮ್ಮ, ವಿಶಾಲಾಕ್ಷಮ್ಮ, ಸಾವಿತ್ರಮ್ಮ, ಲಲಿತಮ್ಮ, ಪವಿತ್ರ, ವಿದ್ಯಾವತಿ, ಕೆ. ಲತಾ, ಕಮಲಮ್ಮ, ಮಂಗಳಮ್ಮ, ಪುಷ್ಪಾವತಿ, ವರಲಕ್ಷ್ಮಿ, ಪಲ್ಲವಿ, ಮಂಜುಳಾ, ವಿದ್ಯಾವತಿ ಹಾಗೂ ಸೌಭಾಗ್ಯಮ್ಮ ಸಿದ್ದರಾಮ ಆಚಾರ್ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶ್ವಕರ್ಮ ಸಮಾಜದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬಡಿಗೇರ್ ಮಾತನಾಡಿ, “ಸಮಾಜದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಮಹಿಳಾ ಘಟಕಕ್ಕೆ ಪೂರ್ಣ ಶಕ್ತಿ ತುಂಬುವ ಮೂಲಕ ಸಮಾಜದ ಪ್ರಗತಿಗೆ ಹೊಸ ಮುನ್ನುಡಿ ಬರೆಯಬೇಕಿದೆ,” ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬಿ. ಸಿದ್ದರಾಮಾಚಾರ್, ತಾಲೂಕು ಅಧ್ಯಕ್ಷ ಸಿ.ಎಚ್.ಸಿದ್ದರಾಜ್, ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಮುಖಂಡರಾದ ಬಿ.ಜಿ. ಬಡಿಗೇರ್, ಕೊಟ್ರೇಶ್, ಕೃಷ್ಣಚಾರಿ, ಮಂಜುನಾಥ, ರವಿ, ರಾಘವೇಂದ್ರ, ಮಳ್ಳಜ್ಜ, ಬನ್ನಿಗೋಳ ಷಣ್ಮುಖ ಹಾಗೂ ಲೋಕಪ್ಪನವರ ವೀರಭದ್ರಾಚಾರ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
