ವಾಕಿಂಗ್ ವೇಳೆ ರೈತನ ಮೇಲೆ ಭೀಕರ ಕರಡಿ ದಾಳಿ. ಕಣ್ಣು, ಕಿವಿ ಭಾಗ ಗಂಭೀರ ಗಾಯ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ರೈತನೋರ್ವ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕರಡಿಯೊಂದು ಭೀಕರ ದಾಳಿ ನಡೆಸಿದ ಘಟನೆ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಏ.1 ರಂದು ಬೆಳಗಿನ ಜಾವ ನಡೆದಿದೆ.
ರೈತ ರಾಯಪ್ಪ (50) ಕರಡಿ ದಾಳಿಗೊಳಗಾದ ವ್ಯಕ್ತಿ. ಕಣ್ಣು ಮತ್ತು ಕಿವಿ ಭಾಗಕ್ಕೆ ಗಂಭೀರ ದಾಳಿಯಾಗಿರುವ ಹಿನ್ನಲೆಯಲ್ಲಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಟ್ರಾಮಾಕೇರ್ ಸೆಂಟರ್ ಗೆ ರವಾನಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
