ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನದಂದು ಶ್ರೀ ಆಂಜನೇಯಸ್ವಾಮಿಯ ರಥೋತ್ಸವವು ಗುರುವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ನಿಮಿತ್ತ ಬೆಳಿಗ್ಗೆಯಿಂದಲೇ ಆಂಜನೇಯ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗಿದವು. ದೇಗುಲದಲ್ಲಿ ಭಕ್ತರು ಹೂ, ಕಾಯಿ ಹಣ್ಣು ಸಮರ್ಪಿಸಿ ದರ್ಶನ ಪಡೆದರು.
ಸಂಜೆ ರಥೋತ್ಸವದ ಮುನ್ನ ನಡೆದ ಪಟಾಕ್ಷಿ ಹರಾಜಿನಲ್ಲಿ ವೆಂಕಟಾಪುರದ ಹನುಮಂತಪ್ಪ ಇವರು 41 ಸಾವಿರ ರೂಗಳಿಗೆ ಭಕ್ತಿಪೂರ್ವಕವಾಗಿ ಪಡೆದರು.
ಈ ವೇಳೆ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ರಥದ ಸುತ್ತ ಐದು ಸಲ ಪ್ರದಕ್ಷಣೆ ಹಾಕಿಸಲಾಯಿತು. ಬಳಿಕ ಭಕ್ತರು ತೇರಿನ ಗಾಲಿಗಳಿಗೆ ಈಡುಗಾಯಿ ಒಡೆಯುತ್ತಿದ್ದಂತೆ ಜೈಬಜರಂಗ್ ಬಲಿ, ಜೈಶ್ರೀರಾಮ್ ಎಂಬ ಜಯಘೋಷಣೆಗಳ ಕುಗೂತ್ತಾ ಯುವಕರು ಸಡಗರದಿಂದ ತೇರು ಎಳೆದು ಸಂಭ್ರಮಿಸಿದರು.
ಈ ವೇಳೆ ಗ್ರಾಮದ ಪ್ರಮುಖರಾದ ಬಿ.ವೆಂಕಟೇಶ್, ಬಿ.ರಮೇಶ್, ಸಣ್ಣ ದುರುಗಪ್ಪ, ಹೆಚ್.ರಾಮಣ್ಣ, ಆರ್.ಎಸ್.ಬಸವರಾಜ್, ಯಮನೂರು, ಕೆ.ಪರಮೇಶ್, ಹಳ್ಳಿ ಚಂದ್ರಪ್ಪ, ಬಿ.ಮಾರುತಪ್ಪ, ಹೋಟೆಲ್ ಗಣೇಶ್, ಗಾದಿಲಿಂಗಪ್ಪ, ಬಿ.ಕೆ.ಬಸವರಾಜ್ ಇತರರು ಭಾಗವಹಿಸಿದ್ದರು.

