ಮಾ.3 ರಂದು ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿ ಮಹಾರಥೋತ್ಸವ. ಎತ್ತಿನ ಹಳಿ ಬಂಡಿಗೆ ಪೂಜೆ ಸಲ್ಲಿಸಿ ನಂದಿಪುರಶ್ರೀ ವಿದ್ಯುಕ್ತ ಚಾಲನೆ.

Spread the love

ಮಾ.3 ರಂದು ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿ ಮಹಾರಥೋತ್ಸವ. ಎತ್ತಿನ ಹಳಿ ಬಂಡಿಗೆ ಪೂಜೆ ಸಲ್ಲಿಸಿ ನಂದಿಪುರಶ್ರೀ ವಿದ್ಯುಕ್ತ ಚಾಲನೆ.

ವರದಿ : ಯಲ್ಲಪ್ಪಗೌಡ ಪೂಜಾರ್,

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ತಂಬ್ರಹಳ್ಳಿ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಐತಿಹಾಸಿಕ ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ನಂದಿಪುರದ ಶ್ರೀ ಡಾ.ಮಹೇಶ್ವರ ಸ್ವಾಮೀಜಿ ಅವರು ಎತ್ತಿನ ಹಳಿ ಬಂಡಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೋತ್ಸವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. 

ತಂಬ್ರಹಳ್ಳಿ ಐತಿಹಾಸಿಕ ಶ್ರೀ ಬಂಡೆ ರಂಗನಾಥೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ಸಾಂಪ್ರದಾಯಿಕವಾಗಿ ಎತ್ತಿನ ಹಳಿ ಬಂಡಿಗೆ ಪೂಜೆ ಸಲ್ಲಿಸಿ ಜಾತ್ರೋತ್ಸವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ತಂಬ್ರಹಳ್ಳಿಯ ಐತಿಹಾಸಿಕ ಶ್ರೀ ಬಂಡೆರಂಗನಾಥೇಶ್ವರ ಸ್ವಾಮಿ ಜಾತ್ರೆಯು ಫಾಲ್ಗುಣ ಶುದ್ದ ಹುಣ್ಣಿಮೆಯ ದಿನದಂದು ಮಹಾರಥೋತ್ಸವ ಜರುಗುತ್ತದೆ. ಅದರ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ತಂಬ್ರಹಳ್ಳಿಯಲ್ಲಿ ‘ಎತ್ತಿನ ಹಳಿ ಬಂಡಿಗೆ’ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಎಳೆಯುವ ಮೂಲಕ ಚಾಲನೆ ನೀಡಲಾಯಿತು.
ಇದೇ ವೇಳೆ ಜಾತ್ರಾ ಸಮಿತಿ ಸದಸ್ಯರು ಹಾಗೂ ತಂಬ್ರಹಳ್ಳಿ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಜಾತ್ರೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಮಿತಿಯ ಅದ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಊರಿನ ಹಿರಿಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *