ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗಧಿ : ಆಕ್ಷೇಪಣೆಗೆ ಅವಕಾಶ.

Spread the love

 

ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗಧಿ : ಆಕ್ಷೇಪಣೆಗೆ ಅವಕಾಶ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).

ವಿಜಯನಗರ ಜಿಲ್ಲೆಯ ಆರು ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗಧಿಪಡಿಸಲಾಗಿದ್ದು, ಈ ಕುರಿತು  ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್ 24 ರೊಳಗಾಗಿ ಸಲ್ಲಿಸಲು ತಿಳಿಸಿದೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 37 ಗ್ರಾಮ ಪಂಚಾಯಿತಿಗಳಿದ್ದು 655 ಸದಸ್ಯ ಸ್ಥಾನ, ಹಗರಿಬೊಮ್ಮನಹಳ್ಳಿಯಲ್ಲಿ 21 ಗ್ರಾಮ ಪಂಚಾಯಿತಿಗಳಿದ್ದು 370 ಸದಸ್ಯ ಸ್ಥಾನ, ಹೊಸಪೇಟೆಯಲ್ಲಿ 14 ಗ್ರಾಮ ಪಂಚಾಯಿತಿಗಳಿದ್ದು 282 ಸದಸ್ಯ ಸ್ಥಾನ, ಕೂಡ್ಲಿಗಿಯಲ್ಲಿ 25 ಗ್ರಾಮ ಪಂಚಾಯಿತಿಗಳಿದ್ದು 482 ಸದಸ್ಯ ಸ್ಥಾನ, ಕೊಟ್ಟೂರು ತಾಲೂಕಿನಲ್ಲಿ 14 ಗ್ರಾಮ ಪಂಚಾಯತಿಗಳಿದ್ದು 205 ಸದಸ್ಯ ಸ್ಥಾನ ಹಾಗೂ ಹೂವಿನಹಡಗಲಿ ತಾಲೂಕಿನಲ್ಲಿ 26 ಗ್ರಾಮ ಪಂಚಾಯತಿಗಳಿದ್ದು 430 ಸದಸ್ಯ ಸ್ಥಾನ ಸೇರಿ ಆರು ತಾಲೂಕುಗಳಲ್ಲಿ ಒಟ್ಟು 137 ಗ್ರಾಮ ಪಂಚಾಯತಿಗಳಿಂದ ಒಟ್ಟು 2424 ಸದಸ್ಯ ಸ್ಥಾನಗಳ ನಿಗಧಿಪಡಿಸಲಾಗಿದೆ.

ಆಕ್ಷೇಪಣೆಗಳಿದ್ದಲ್ಲಿ ಜಾಲತಾಣ https://rdpr.karnataka.gov.in/rdc/public/ ನ ಮೂಲಕ ಅಥವಾ ಖುದ್ದಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ. 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001 ಅಂಚೆ  ಮೂಲಕ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಪಂಚಾಯತ್ ರಾಜ್ ಉಪ ಕಾರ್ಯದರ್ಶಿ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಸದಸ್ಯ ಕಾರ್ಯದರ್ಶಿ ಪ್ರಕಟಣೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *