ಮಹಿಳೆಯರಿಗೆ ಸಮಾನತೆ ವಿರೋಧಿಸಿದವರು ಬಸವಣ್ಣನವರ ತತ್ವಗಳನ್ನು ಅನುಸರಿಸುವರೇ? ಶಾಸಕ ಕೆ.ನೇಮಿರಾಜನಾಯ್ಕ ಪ್ರಶ್ನೆ.

Spread the love

 

ಮಹಿಳೆಯರಿಗೆ ಸಮಾನತೆ ವಿರೋಧಿಸಿದವರು ಬಸವಣ್ಣನವರ ತತ್ವಗಳನ್ನು ಅನುಸರಿಸುವರೇ ? ಶಾಸಕ ಕೆ.ನೇಮಿರಾಜನಾಯ್ಕ ಪ್ರಶ್ನೆ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ್ರು ಮಹಿಳೆಯರಿಗೆ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಸಮಾನ ಅವಕಾಶ ಕಲ್ಪಿಸುವ ಚಿಂತನೆಯಲ್ಲಿದ್ದರೇ ಕೆಲವರು ಮಹಿಳಾ ಸಮಾನತೆಯನ್ನು ವಿರೋಧಿಸುವ ಮೂಲಕ ಬಸವಣ್ಣನವರ ತತ್ವಾದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಇವರೆಲ್ಲ ಬಸವ ತತ್ವಅನುಸರಿಸುವರೇ ಎಂದು ಶಾಸಕ ಕೆ.ನೇಮಿರಾಜನಾಯ್ಕ ಪ್ರಶ್ನಿಸಿದ್ದಾರೆ.

ಪಟ್ಟಣದ ಹಗರಿ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಸಮಿತಿಯಿಂದ ಏರ್ಪಡಿಸಿದ್ದ ವಿಶ್ವಗುರು, ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಹಾಗೂ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಬಸವಣ್ಣನವರು 12 ನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟುವ ಮೂಲಕ ಮೊಟ್ಟಮೊದಲ ಸಂಸತ್ತಿನ ಪರಿಕಲ್ಪನೆ ಮೂಡಿಸಿದ್ದರು. ಬಸವಣ್ಣನವರು ಇಡೀ ದೇಶಕ್ಕೆ ಮಾದರಿ ಮತ್ತು ಅದರ್ಶ ವ್ಯಕ್ತಿಯಾಗಿದ್ದಾರೆ. ದೇಶ ಸುಗಮ, ಸುರಕ್ಷಿತವಾಗಿ ಕಾನೂನು ವ್ಯವಸ್ಥೆ ಜಾರಿಯಲ್ಲಿದ್ದರೇ ಅಂದಿನ ಅನುಭವ ಮಂಟದ ಬುನಾದಿಯಾಗಿದೆ. ಜನರ ಅಶೋತ್ತರಗಳು ನಿಭಾಯಿಸುವ ಕಾರ್ಯ ಬಸವಣ್ಣನವರ ತತ್ವ ಸಿದ್ದಾಂತಗಳೇ ಮೂಲವಾಗಿದೆ. ಬಸವಣ್ಣ ತತ್ವ ಸಿದ್ದಾಂತಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ನೀಡಬೇಕು.

ಅದರೆ ಪ್ರಸ್ತುತದಲ್ಲಿ ನರೇಂದ್ರ ಮೋದಿ ಅವರು ಬಸವಣ್ಣ ತತ್ವ ಸಿದ್ದಾಂತ ಪಾಲಿಸುವ ಮೂಲಕ ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಅವಕಾಶ ನೀಡಿದರೇ ವಿಪಕ್ಷಗಳು ವಿರೋಧಿಸುವ ಮೂಲಕ  ಬಸವಣ್ಣ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ. ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಲು ಪ್ರಮುಖ ಕಾರ್ಯಗಳನ್ನು ಮಾಡಿದ್ದರು. ಅನುಭವ ಮಂಟಪ ಕೇವಲ ಪುರುಷರಿಗೆ ಸೀಮಿತವಾಗಿರಲಿಲ್ಲ. ಅಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಸ್ಥಾನಮಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರವಿತ್ತು. ಅಕ್ಕಮಹಾದೇವಿ ಅಂತಹ ಅನೇಕ ಶರಣೆಯರು ಅಲ್ಲಿನ ಚರ್ಚೆಗಳಲ್ಲಿ ಸಕ್ತಿಯವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರು. ಆಧ್ಯಾತ್ಮಿಕ ಸಮಾನತೆ ನೀಡಲಾಗಿತ್ತು. ಕಾಯಕ ಮತ್ತು ದಾಸೋಹದಲ್ಲಿ ಸಮಾನಾವಕಾಶವಿತ್ತು. ವಚನ ಸಾಹಿತ್ಯ ಸ್ವಾತಂತ್ರವಿತ್ತು.ಆದರೆ ಸಂಸತ್ತಿನಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಲು ಬಯಸಿದರೇ ಅದನ್ನು ವಿರೋಧಿಸುವವರು ಇದ್ದಾರೆ. ಇದರಿಂದ ನಮ್ಮಅಕ್ಕ ತಂಗಿಯರಿಗೆ ತುಂಬಾ ನೋವುಂಟ ಮಾಡಿದೆ.

2012 ರಲ್ಲಿ ಪಟ್ಟಣದಲ್ಲಿ ಬಸವೇಶ್ವರ ಬಜಾರನಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿತ್ತು. ಅದನ್ನು ನವೀಕರಣಕ್ಕಾಗಿ ಅನುದಾನ ನೀಡಲಾಗಿ ಬಸವ ಜಯಂತಿಯಂದೇ ಅನಾವರಣಗೊಳಿಸಿರುವುದು ಸಂತಸ ತಂದಿದೆ.  ಇದೇ ಮಾದರಿಯಲ್ಲಿ ತಲಾ 65 ಲಕ್ಷರೂ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ, ಡಾ.ಅಂಬೇಡ್ಕರ್, ಭಕ್ತ ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಬಸವ ಜಯಂತಿ ಸಮಿತಿ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಮಾತನಾಡಿ, ಬಸವ ಜಯಂತಿಯಂದು ಬಸವಣ್ಣ ಪುತ್ಥಳಿ ಅನಾವರಣಗೊಳಿಸಿರುವುದು ಸಂತಸ ಮೂಡಿದೆ. 2012 ರಲ್ಲಿ ಶಾಸಕ ಕೆ.ನೇಮಿರಾಜನಾಯ್ಕ ಅವರು ಮೊದಲ ಬಾರಿಗೆ ಆಕರ್ಷಕವಾದ ಅಶ್ವರೂಢ ಶ್ರೀಬಸವೇಶ್ವರ ಪುತ್ಥಳಿ ನಿರ್ಮಿಸುವ ಮೂಲಕ ಪಟ್ಟಣದ ಬಸವೇಶ್ವರ ಬಜಾರಗೆ ಕಳೆ ತಂದು ಕೊಟ್ಟಿದ್ದರು. ಇದೀಗ 13 ವರ್ಷಗಳ ಬಳಿಕ ಬಸವೇಶ್ವರ ವೃತ್ತವನ್ನು 65 ಲಕ್ಷ ರೂಗಳ ಅನುದಾನ ನೀಡಿ ಮರುವಿನ್ಯಾಸ ನೀಡುವ ನವೀಕರಣ ಮಾಡಿ ಬಸವೇಶ್ವರ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ. ನಿಜಕ್ಕೂ ಶಾಸಕರು ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಮಾಡುವ ಮೂಲಕ ಅದೇ ಹಾದಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಸಾಮಾಜಿಕ ಸೇವೆಯನ್ನು ಗುರುತಿಸಿ ಚಾರ್ಟೆಡ್ ಅಕೌಟೆಂಟ್ ಎಂ.ಎಸ್.ಸರ್ಪಭೂಷಣ್, ಚಾರ್ಟೆಡ್ ಅಕೌಟೆಂಟ್ ಪಾರ್ವತಿ ಚೋರನೂರು, ಪುರಸಭೆ ಸದಸ್ಯೆ ಕಮಲಮ್ಮ ಶಿವಮೊಗ್ಗ, ನಾಗಭೂಷಣ್ ಗದ್ದಿಕೇರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮರಿಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ, ಗವಿ ಶಾಖಾಮಠ ಮರಿಶಾಂತವೀರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ನವೀಕರಣಗೊಳಿಸಿದ ಅಶ್ವರೂಢ ಶ್ರೀಬಸವೇಶ್ವರರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

ವೀರಶೈವ ಸಮಾಜದ ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪುರಸಭೆ ಸದಸ್ಯೆ ಆರ್.ಕಮಲಮ್ಮ, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ, ಪ್ರಮುಖರಾದ ಜಗದೀಶ್, ಉಪತಹಶೀಲ್ದಾರ ಶಿವಕುಮಾರಗೌಡ, ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ ವೇದಿಕೆಯಲ್ಲಿ ಇದ್ದರು. ಶಿಕ್ಷಕರಾದ ಶಿವಶಂಕರಯ್ಯ, ಇಟಗಿ ಪ್ರಭಾಕರ್ ವೇದಿಕೆ ನಿರ್ವಹಿಸಿದರು. ಸಂಗೀತ ಶಿಕ್ಷಕಿ ಶಾರದಮ್ಮ ಸಂಗಡಿಗರು ಮತ್ತು ಗಾಯನ ಕಲಾವಿದ ಮಹಾಂತೇಶ್ ಸಂಗಡಿಗರು ಬಸವಣ್ಣನವರ ವಚನಗಾಯನ ಸೇವೆ ನೀಡಿದರು.

Leave a Reply

Your email address will not be published. Required fields are marked *