ಬೆಳ್ಳಿ ರಥದಲಿ ಶರಣ ಬಸವಣ್ಣರ ಭಾವಚಿತ್ರ ಭವ್ಯ ಮೆರವಣಿಗೆ : ವಿವಿಧ ಮಠಾಧೀಶರು ಭಾಗಿ.

Spread the love

ಬೆಳ್ಳಿ ರಥದಲಿ ಶರಣ ಬಸವಣ್ಣರ ಭಾವಚಿತ್ರ ಭವ್ಯ ಮೆರವಣಿಗೆ : ವಿವಿಧ ಮಠಾಧೀಶರು ಭಾಗಿ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ವಿಶ್ವಗುರು ಜಗಜ್ಯೋತಿ ಶ್ರೀಬಸವೇಶ್ವರ ಜಯಂತಿ ನಿಮಿತ್ತ ಪಟ್ಟಣದ ರಾಮನಗರದ ಈಶ್ವರ ದೇವಸ್ಥಾನದಿಂದ ಬಸವೇಶ್ವರ ಬಜಾರ ಮಾರ್ಗದ ಮೂಲಕ ಅಶ್ವರೂಢ ಕಂಚಿನ ಬಸವೇಶ್ವರ ಪುತ್ಥಳಿವರೆಗೆ ವಿವಿಧ ವಾದ್ಯಕಲಾ ತಂಡದೊAದಿಗೆ ಬೆಳ್ಳಿರಥದಲ್ಲಿ ಶರಣ ಬಸವಣ್ಣನವರ ಭಾವಚಿತ್ರವನ್ನು ಭವ್ಯ ಮೆರವಣಿಗೆಯನ್ನು ಸೋಮವಾರ ನಡೆಸಲಾಯಿತು.

ಮೆರವಣಿಗೆಯಲ್ಲಿ ನಂದಿಕೋಲು, ಸಮಾಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳಿಗೆ ಹೆಜ್ಜೆ ಹಾಕುತ್ತ ಬಸವಣ್ಣನವರ ಅನುಯಾಯಿಗಳು ಪಾದಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಶಾಸಕ ಕೆ.ನೇಮಿರಾಜನಾಯ್ಕ ಸೇರಿ ಮರಿಯಮ್ಮನಹಳ್ಳಿಯ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಬಾಚಿಗೊಂಡೆನಹಳ್ಳಿಯ ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ, ಕಡಲಬಾಳು ಗವಿ ಶಾಖಾಮಠದ ಮರಿಶಾಂತವೀರ ಸ್ವಾಮೀಜಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬಸವ ಜಯಂತಿ ಸಮಿತಿಯ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ವೀರಶೈವ ಮಹಾಸಭಾ ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ್ರು, ಪುರಸಭೆ ಸದಸ್ಯೆ ಆರ್.ಕಮಲಮ್ಮ, ಪ್ರಮುಖರಾದ ವೈ.ಮಲ್ಲಿಕಾರ್ಜುನ, ಕಿನ್ನಾಳ್ ಸುಭಾಷ್, ಚಿತ್ತವಾಡಗಿ ಪ್ರಕಾಶ್, ಶ್ರೀಶೈಲ, ಶಿವರುದ್ರಪ್ಪ, ರಾಜುಪಾಟೀಲ್, ಬಾದಾಮಿ ನಟರಾಜ, ಇಕ್ಕೇರಿ ಕೊಟ್ರೇಶ್, ಸಿದ್ದರಾಜು, ಕನಕಪ್ಪ ಉಪ್ಪಾರ, ತಹಶೀಲ್ದಾರ ಆರ್.ಕವಿತ, ಉಪತಹಶೀಲ್ದಾರ ಶಿವಕುಮಾರ ಗೌಡ, ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ ಇದ್ದರು.

Leave a Reply

Your email address will not be published. Required fields are marked *