ಹಗರಿಬೊಮ್ಮನಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಕೆ‌.ರೇಷ್ಮಾ ಸಿಕಂದರ್ ಆಯ್ಕೆ.

Spread the love

ಹಗರಿಬೊಮ್ಮನಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಕೆ‌.ರೇಷ್ಮಾ ಸಿಕಂದರ್ ಆಯ್ಕೆ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯೆ ಕೆ.ರೇಷ್ಮಾ ಸಿಕಂದರ್ ಅವರು ಎರಡನೆಯ ಅವಧಿಗೆ ನೂತನ ಅಧ್ಯಕ್ಷರಾಗಿ 13 ಮತಗಳು ಪಡೆದು ಚುನಾಯಿತರಾದರು.

ನಿಕಟಪೂರ್ವ ಅಧ್ಯಕ್ಷ ಎಂ.ಮರಿರಾಮಪ್ಪ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30 ರಂದು ಚುನಾವಣೆ ನಡೆಸಲಾಯಿತು. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಣಕಾರ್ ಸುರೇಶ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ರೇಷ್ಮಾ ಸಿಕಂದರ್ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 23 ಸದಸ್ಯ ಸ್ಥಾನ ಹೊಂದಿರುವ ಪುರಸಭೆಯಲ್ಲಿ ಕೆ.ರೇಷ್ಮಾ ಸಿಕಂದರ್ ಪರ 13 ಮತಗಳು ಪಡೆದರೇ, ಬಣಕಾರ್ ಸುರೇಶ್ ಪರ 9 ಮತಗಳ ಪಡೆದು ಪರಾಜಿತರಾದರು.

ಮೊದಲನೆಯ ಅವಧಿಗೆ ಅಧ್ಯಕ್ಷರಾಗಿ ಎಂ.ಮರಿರಾಮಪ್ಪ, ಉಪಾಧ್ಯಕ್ಷರಾಗಿ ಅಂಬಿಕಾ ದೇವೆಂದ್ರಪ್ಪ ಆಯ್ಕೆ ಆಗಿದ್ದರು.

ಈ ವೇಳೆ ಉಪಾಧ್ಯಕ್ಷರಾದ ಸೆರೆಗಾರ ನೇತ್ರಾವತಿ, ಸದಸ್ಯರಾದ ಪವಾಡಿ ಹನುಮಂತಪ್ಪ, ರಾಜೇಶ್ ಬ್ಯಾಡಗಿ, ಅಜೀಜುಲ್ಲಾ, ಖಾಜಾಬನ್ನಿ ಅಲ್ಲಾಭಕ್ಷಿ, ಗುಂಡ್ರು ಸರಸ್ವತಿ, ಮಂಜುಳಾ ಕೃಷ್ಣನಾಯ್ಕ, ಅಂಬಿಕಾ ದೇವೆಂದ್ರಪ್ಪ, ತೆಲಗಿ ಇಸ್ಮಾಯಿಲ್, ಜೋಗಿ ಹನುಮಂತ, ಕೆ.ಎಂ.ನವೀನ್, ದೀಪಕ್ ಕಠಾರೆ, ಬಣಕಾರ್ ಸುರೇಶ್, ಬಿ.ಗಂಗಾಧರ, ಆರ್.ಕಮಲಮ್ಮ, ಅಂಬಳಿ ಮಂಗಳ ರವೀಂದ್ರಗೌಡ, ನಾಗರಾಜ ಜನ್ನು ಚುನಾವಣೆಯಲ್ಲಿ ಹಾಜರಿದ್ದರು.

ಬಿಜೆಪಿ ಸದಸ್ಯರಾದ ಮಲ್ಲೇಶ್ವರಿ ಭರತ್, ಎಚ್.ಎಂ.ಚೆನ್ನಮ್ಮ ವಿಜಯಕುಮಾರ್, ಭೋವಿ ವೀರೇಶ್ ಗೈರಾಗಿದ್ದರು.

ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕ ಕೆ.ನೇಮಿರಾಜನಾಯ್ಕ ಮತ ಚಲಾಯಿಸಿದರೇ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಂಸದ ಈ.ತುಕಾರಾಂ ಮತ ಚಲಾಯಿಸಿದರು.

ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ : ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ 5 ಸಿಪಿಐ ಸೇರಿದಂತೆ 6 ಪಿಎಸ್ಐಗಳು ಹಾಗೂ 100 ಪೇದೆಗಳನ್ನು ನಿಯೋಜನೆ ಮಾಡಲಾಗಿತ್ತು.

Leave a Reply

Your email address will not be published. Required fields are marked *