Last Updated on March 5, 2026 by ASHOK UPPAR
ಯುವಕನ ಬರ್ಬರ ಕೊಲೆ, ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದು ಎಸ್ಕೇಪ್ ಆದ ಕಿರಾತಕರು.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೂವಿನಹಡಗಲಿ.
ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಬೀರೇಶ (25) ಎಂಬ ಯುವಕನ ಕೊಲೆ ಮಾಡಿ, ಮೃತದೇಹವನ್ನು ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮೃತನ ಮನೆ ಹಿಂದೆಯೇ ಎಸೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕುರಿಗಾಹಿ ಬೀರೇಶ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ. ಬುಧವಾರ ಸಂಜೆ ಬೀರೇಶ ಅವರ ಮನೆಯ ಹಿಂಭಾಗದಲ್ಲಿ ಮೃತ ದೇಹ ಪತ್ತೆಯಾಗಿದೆ. ಪ್ರಾಣಿ ಸತ್ತಿರುವ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಗಮನಿಸಿದಾಗ, ಒಂದು ಚೀಲ ಕಂಡು ಬಂದಿದ್ದು, ಅದನ್ನು ತೆರೆದಾಗ ಬೀರೇಶ ಅವರ ದೇಹದ ಭಾಗಗಳು ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರು ಹಿರೇಹಡಗಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಲ್ಲಪ್ಪ ಹೂಗಾರ ಸ್ಥಳದಲ್ಲಿದ್ದರು. ಸದ್ಯಕ್ಕೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
