ತಂಬ್ರಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ತೋಂಟದಾರ್ಯ ಸ್ವಾಮಿ ರಥೋತ್ಸವ

ವಿಜೃಂಭಣೆಯಿಂದ ಜರುಗಿದ ತೋಂಟದಾರ್ಯ ಸ್ವಾಮಿ ರಥೋತ್ಸವ.

ವರದಿ : ಯಲ್ಲಪ್ಪಗೌಡ ಪೂಜಾರ್.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ತಂಬ್ರಹಳ್ಳಿ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಅಮವಾಸ್ಯೆ ಪ್ರಯುಕ್ತ ಜರುಗಿದ ಶ್ರೀ ಮನ್ ನಿರಂಜನ ಜಗದ್ಗುರು ತೋಂಟದಾರ್ಯ ಸ್ವಾಮಿಯ ರಥೋತ್ಸವವು ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರೀಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಜರುಗಿದವು. ಭಕ್ತರು ಹೂ-ಹಣ್ಣು, ತೆಂಗಿನಕಾಯಿ, ತರಹೇವರಿ ಪುಷ್ಪಗಳನ್ನು  ಸಮರ್ಪಿಸಿದರು.

ಸಂಜೆ ರಥೋತ್ಸವದ ಮುನ್ನ ನಡೆದ ಪಟಾಕ್ಷಿ ಹರಾಜಿನಲ್ಲಿ ಗ್ರಾಮದ ಟಿ.ಹೆಚ್.ಎಂ.ಮಹಾಂತಯ್ಯ ಎಂಬುವರು ರೂ.32100 ಸಾವಿರಗಳಿಗೆ ಭಕ್ತಿಪೂರ್ವಕವಾಗಿ ಪಡೆದರು.

ಈ ವೇಳೆ ತೋಂಟದಾರ್ಯ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ರಥದ ಸುತ್ತ ಐದು ಸಲ ಪ್ರದಕ್ಷಣೆ ಹಾಕಲಾಯಿತು. ಬಳಿಕ ಭಕ್ತರು ತೇರಿನ ಗಾಲಿಗಳಿಗೆ ಈಡುಗಾಯಿ ಒಡೆಯುತ್ತಿದ್ದಂತೆ ತೋಂಟದಾರ್ಯ ಸ್ವಾಮೀಜಿಗೆ ಬಹುಪರಾಕ್ ಎಂಬ ಜಯಘೋಷಣೆಗಳ ಕೂಗುತ್ತಾ ಭಕ್ತರು ಸಡಗರದಿಂದ ತೇರು ಎಳೆದು ಸಂಭ್ರಮಿಸಿದರು.

ಈ ವೇಳೆ ಗದ್ದಿಕೆರೆ ಹಿರೇಮಠದ ಶ್ರೀಚರಂತೇಶ್ವರ ಸ್ವಾಮೀಜಿ, ಹಬೊಹಳ್ಳಿ ಹಾಲಸ್ವಾಮಿ ಮಠದ ಶ್ರೀಹಾಲಸಿದ್ದೇಶ್ವರ ಸ್ವಾಮೀಜಿ, ಬಾಚಿಗೊಂಡೆನಹಳ್ಳಿಯ ತೋಂಟದಾರ್ಯ ಶಾಖಾಮಠದ ಶ್ರೀ ಶಿವಮಹಾಂತ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಕೆ.ನೇಮಿರಾಜನಾಯ್ಕ ಸೇರಿದಂತೆ ತೋಂಟದಾರ್ಯ ರಥೋತ್ಸವ ಸಮಿತಿ ಅಧ್ಯಕ್ಷ ಬಣಕಾರ ಮಲ್ಲಿಕಾರ್ಜುನ ಹಾಗೂ ಪ್ರಮುಖರಾದ ಬಣಕಾರ ಕೊಟ್ರೇಶ್, ಅಕ್ಕಿ ಶಿವಕುಮಾರ್,  ಗೌರಜ್ಜನವರ ಬಸವರಾಜ, ಅಕ್ಕಿ ತೋಟೇಶ್, ಬುಕಿಟಗಾರ ಗಂಗಣ್ಣ, ಹೆಚ್.ಬಿ.ಗಂಗಾಧರ ಗೌಡ, ಬಿ.ಎಂ.ತೋಟಯ್ಯ, ಪಟ್ಟಣಶೆಟ್ಟಿ ಸುರೇಶ, ಎಸ್.ವಿ.ಪಾಟೀಲ್, ಅರುಣ್ ಕುಮಾರ್,, ಆರ್ಚಕರಾದ ಮಲ್ಲಯ್ಯ ಸ್ವಾಮಿ. ತಿಪ್ಪಯ್ಯಸ್ವಾಮಿ, ಟಿ.ಹೆಚ್.ಎಂ.ನಾಗಭೂಷಣಯ್ಯ ಇತರರು ಇದ್ದರು.


Comments

Leave a Reply

Your email address will not be published. Required fields are marked *