Tag: Redesign

  • ಪ್ರಯಾಣಿಕರಿಂದ ರಶ್ ಆಗಿದ್ದ ಕೆಕೆಆರ್‌ಟಿಸಿ ಬಸ್ಸು ಮರಕ್ಕೆ ಡಿಕ್ಕಿ : ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಾಯ.

    ಪ್ರಯಾಣಿಕರಿಂದ ರಶ್ ಆಗಿದ್ದ ಕೆಕೆಆರ್‌ಟಿಸಿ ಬಸ್ಸು ಮರಕ್ಕೆ ಡಿಕ್ಕಿ : ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಾಯ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ). ಪ್ರಯಾಣಿಕರು ತುಂಬಾ ರಶ್ ಇದ್ದ ಕೆಕೆಎಸ್ ಆರ್ ಟಿಸಿ ಬಸ್ ಬೈಕನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ‌ನಡೆದಿದೆ. ಕೂಡ್ಲಿಗಿ ಘಟಕಕ್ಕೆ ಸೇರಿದ ಬಸ್ ಬೆಳಿಗ್ಗೆ ತಾಲೂಕಿನ ಕಸಾಪುರ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ…

  • ಕುರುವತ್ತಿ ಮಲ್ಲಿಕಾರ್ಜುನ, ಬಸವೇಶ್ವರಸ್ವಾಮಿ ರಥೋತ್ಸವ ಅದ್ದೂರಿ.

    ಕುರುವತ್ತಿ ಮಲ್ಲಿಕಾರ್ಜುನ, ಬಸವೇಶ್ವರಸ್ವಾಮಿ ರಥೋತ್ಸವ ಅದ್ದೂರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಕುರುವತ್ತಿಯ ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶಿವರಾತ್ರಿ ಅಮಾವಾಸ್ಯೆ ದಿನ ಸಂಭ್ರಮದಿಂದ ಜರುಗಿತು. ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ತಮ್ಮ ಹರಕೆಯನ್ನು ತೀರಿಸಿದರು, ಶ್ರೀಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸಕಲ ಮಂಗಳವಾದ್ಯಗಳೊಂದಿಗೆ ರಥ ಬೀದಿ ಮೂಲಕ ಮೆರವಣಿಗೆ ಮಾಡಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ…

  • ಹಂಪಿ ಉತ್ಸವದ ಸಂಭ್ರಮ : ಬಣ್ಣ ಬಣ್ಣದ ಗಾಳಿಪಟ ಹಬ್ಬಕ್ಕೆ ಅದ್ಧೂರಿ ಚಾಲನೆ

    ಹಂಪಿ ಉತ್ಸವದ ಸಂಭ್ರಮ : ಬಣ್ಣ ಬಣ್ಣದ ಗಾಳಿಪಟ ಹಬ್ಬಕ್ಕೆ ಅದ್ಧೂರಿ ಚಾಲನೆ

    ಹಂಪಿ ಉತ್ಸವದ ಸಂಭ್ರಮ : ಬಣ್ಣ ಬಣ್ಣದ ಗಾಳಿಪಟ ಹಬ್ಬಕ್ಕೆ ಅದ್ಧೂರಿ ಚಾಲನೆ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ. ಐತಿಹಾಸಿಕ ವಿಜಯನಗರದ ವೈಭವವನ್ನು ಸಾರುವ ‘ಹಂಪಿ ಉತ್ಸವ – 2026’ ರ ಅಂಗವಾಗಿ ಹೊಸಪೇಟೆ ನಗರದ ವಿಜಯನಗರ ಕಾಲೇಜು ಮೈದಾನದಲ್ಲಿ‌ ಶನಿವಾರ ಗಾಳಿಪಟ ಉತ್ಸವಕ್ಕೆ ಶಾಸಕ ಹೆಚ್.ಆರ್.ಗವಿಯಪ್ಪ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಆಡಳಿತದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯುತ್ತಿದೆ. ಮುಂಜಾನೆಯಿಂದಲೇ ಮೈದಾನದಲ್ಲಿ…

  • ಹಂಪಿ ಇತಿಹಾಸ, ಪರಂಪರೆ ಅರಿವಿಗೆ ಕನ್ನಡ ವಿವಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ ಆಯೋಜನೆ : ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿಕೆ.

    ಹಂಪಿ ಇತಿಹಾಸ, ಪರಂಪರೆ ಅರಿವಿಗೆ ಕನ್ನಡ ವಿವಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ ಆಯೋಜನೆ : ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿಕೆ.

    ಕನ್ನಡ ವಿಶ್ವ ವಿದ್ಯಾಲಯ ವತಿಯಿಂದ ಮಕ್ಕಳಿಗೆ ಐತಿಹಾಸಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ. ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿಕೆ.  ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ. ಮಕ್ಕಳಲ್ಲಿ ತಿಳುವಳಿಕೆ ಮೂಡಿಸಿ, ಹಂಪಿಯ ಇತಿಹಾಸ ಪರಂಪರೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡ ವಿಶ್ವ ವಿದ್ಯಾಲಯದಿಂದ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಆರ್ ಗವಿಯಪ್ಪ ತಿಳಿಸಿದರು. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಂಪಿ ಹಾಗೂ ವಿಜಯನಗರ ಜಿಲ್ಲಾಡಳಿತ ದ…

  • ರಾಜಪ್ರಭುತ್ವದ ಅಭಿವೃದ್ಧಿಯಲ್ಲಿ ಕೆಳಸ್ತರದ ಜನರ ಕೊಡುಗೆ ಅಪಾರ : ಸಂಶೋಧಕ ಡಾ.ಸಮದ್ ಕೊಟ್ಟೂರು ಹೇಳಿಕೆ.

    ರಾಜಪ್ರಭುತ್ವದ ಅಭಿವೃದ್ಧಿಯಲ್ಲಿ ಕೆಳಸ್ತರದ ಜನರ ಕೊಡುಗೆ ಅಪಾರ : ಸಂಶೋಧಕ ಡಾ.ಸಮದ್ ಕೊಟ್ಟೂರು ಹೇಳಿಕೆ.

    ರಾಜಪ್ರಭುತ್ವದ ಅಭಿವೃದ್ಧಿಯಲ್ಲಿ ಕೆಳಸ್ತರದ ಜನರ ಕೊಡುಗೆ ಅಪಾರ : ಸಂಶೋಧಕ ಡಾ.ಸಮದ್ ಕೊಟ್ಟೂರು ಹೇಳಿಕೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ.  ವಿಜಯನಗರ ಸಾಮ್ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಅಧ್ಯಯನ ಮಾಡುವುದರಿಂದ ಸಾಮ್ರಾಜ್ಯ ನಿರ್ಮಾಣದಲ್ಲಿ ಜನಸಾಮಾನ್ಯರ ಜೀವನಶೈಲಿ, ಆರ್ಥಿಕ ಪರಿಸ್ಥಿತಿ ಮತ್ತು ಅವರ ಪರಿಶ್ರಮದ ಜತೆಗೆ ರಾಜಪ್ರಭುತ್ವಕ್ಕೆ ನೀಡಿದ ಅಪಾರ ಕೊಡುಗೆಯನ್ನು ತಿಳಿಯಬಹುದು ಎಂದು ಸಂಶೋಧಕ ಡಾ.ಸಮದ್ ಕೊಟ್ಟೂರು ಹೇಳಿದರು. ಹಂಪಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತ ಸಹಯೋಗದಲ್ಲಿ…

  • ಬಾನಂಗಳದಲಿ ಚಿತ್ತಾರ ಮೂಡಿಸಿದ ಡ್ರೋನ್ ಶೋ, ಹಂಪಿ ಉತ್ಸವದಲ್ಲಿ ಗಮನಸೆಳೆದ ಪ್ರದರ್ಶನ.

    ಬಾನಂಗಳದಲಿ ಚಿತ್ತಾರ ಮೂಡಿಸಿದ ಡ್ರೋನ್ ಶೋ, ಹಂಪಿ ಉತ್ಸವದಲ್ಲಿ ಗಮನಸೆಳೆದ ಪ್ರದರ್ಶನ.

    ಬಾನಂಗಳದಲಿ ಚಿತ್ತಾರ ಮೂಡಿಸಿದ ಡ್ರೋನ್ ಶೋ, ಹಂಪಿ ಉತ್ಸವದಲ್ಲಿ ಗಮನಸೆಳೆದ ಪ್ರದರ್ಶನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ. ಹಂಪಿ ಉತ್ಸವದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಅತ್ಯಾಧುನಿಕ ಡ್ರೋನ್ ಶೋ ಉದ್ಘಾಟನಾ ಸಮಾರಂಭದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ವಿಜಯನಗರದ ಗತವೈಭವವನ್ನು ಬಾನಂಗಳದಲ್ಲಿ ಅನಾವರಣಗೊಳಿಸಿತು. ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ಈ ಅಪೂರ್ವ ಸಂಗಮವು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನೂರಾರು ಡ್ರೋನ್‌ಗಳು ಆಕಾಶದಲ್ಲಿ ಹಂಪಿಯ ಪ್ರಸಿದ್ಧ ಕಲ್ಲಿನ ರಥ, ಭವ್ಯವಾದ ವಿರೂಪಾಕ್ಷ ದೇವಾಲಯ ಮತ್ತು…

  • ಹಂಪಿ ಉತ್ಸವ : ಹೆಣ್ಣು ಭ್ರೂಣ ಉಳಿಸುವ ಸಂದೇಶ ಸಾರಿದ ರಂಗವಲ್ಲಿ. ರಂಗೋಲಿ ಮೂಲಕ ಸಾಮಾಜಿಕ ಜಾಗೃತಿ.

    ಹಂಪಿ ಉತ್ಸವ : ಹೆಣ್ಣು ಭ್ರೂಣ ಉಳಿಸುವ ಸಂದೇಶ ಸಾರಿದ ರಂಗವಲ್ಲಿ. ರಂಗೋಲಿ ಮೂಲಕ ಸಾಮಾಜಿಕ ಜಾಗೃತಿ.

    ಹಂಪಿ ಉತ್ಸವ : ರಂಗೋಲಿ ಮೂಲಕ ಸಾಮಾಜಿಕ ಜಾಗೃತಿ ಹೆಣ್ಣು ಭ್ರೂಣ ಉಳಿಸುವ ಸಂದೇಶ ಸಾರಿದ ರಂಗವಲ್ಲಿ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹಂಪಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯಿತು. “ಹೆಣ್ಣು ಭ್ರೂಣ ಉಳಿಸಿ” ಎಂಬ ರಂಗವಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಹಾಗೂ…