ಹಿಂದೂ ಸಮಾವೇಶಕ್ಕೆ ಪಕ್ಷಾತೀತವಾಗಿ ಒಗ್ಗಟ್ಟಾಗಿ ಶೋಭಾಯಾತ್ರೆ ಯಶಸ್ವಿಗೊಳಿಸಿ : ಶಾಸಕ ಕೆ.ನೇಮಿರಾಜ್ ನಾಯ್ಕ.

ಸಂಸ್ಕಾರ, ಸಂಸ್ಕೃತಿ ಮತ್ತು ಸಮಾನತೆ ಬುನಾದಿ ಹಿಂದೂ ಧರ್ಮ
ಹಿಂದೂ ಸಮಾವೇಶಕ್ಕೆ ಪಕ್ಷಾತೀತವಾಗಿ ಒಗ್ಗಟ್ಟಾಗಿ ಶೋಭಾಯಾತ್ರೆ ಯಶಸ್ವಿಗೊಳಿಸಿ
ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
‘ವಸುಧೈವ ಕುಟುಂಬಕಂ’ ಎಂಬ ಧ್ಯೇಯ ವ್ಯಾಕ್ಯದಲ್ಲಿ ಇಡೀ ಜಗತ್ತಿಗೆ ಸಂದೇಶ ಸಾರಿದ ಹಿಂದೂ ಧರ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಸಮಾನತೆ ಬುನಾದಿಯಾಗಿದೆ. ಹಿಂದೂ ಸಮಾವೇಶ ಹಬ್ಬದಂತೆ ಆಚರಿಸಬೇಕಿದೆ. ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶದಲ್ಲಿ ಆಚಾರ, ವಿಚಾರ, ಗಟ್ಟಿಗೊಳಿಸುವ ಉದ್ದೇಶಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು. ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಹಿಂದೂ ಸಮಾವೇಶ ಸಮಿತಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಪಟ್ಟಣದಲ್ಲಿ ಶನಿವಾರ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು, ಯುವಕರು ಮತ್ತು ಹಿಂದೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸ್ವಯಂಪ್ರೇರಿತವಾಗಿ ಭಾಗವಹಿಸಬೇಕಿದೆ. ಹಳೇಊರಿನಿಂದ ಆರಂಭವಾಗಲಿರುವ ಶೋಭಾಯಾತ್ರೆಯಲ್ಲಿ ವಿವಿಧ ವಾದ್ಯಕಲಾತಂಡಗಳು, ಭಾರತ ಮಾತೆಯ ಭಾವಚಿತ್ರ ಮೆರವಣಿಗೆ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಹಿಂದೂಗಳು ಭವ್ಯ ಮೆರವಣಿಗೆಗೆ ಸಾಕ್ಷಿಯಾಗಬೇಕಿದೆ. ಹಿಂದೂ ಸಮಾವೇಶವೂ ಕೇವಲ ಪಟ್ಟಣಕ್ಕೆ ಸೀಮಿತವಾಗದೇ ಮರಿಯಮ್ಮನಹಳ್ಳಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿಂದ ಸ್ವಯಂಪ್ರೇರಿತರಾಗಿ ಭಾಗವಹಿಸಬೇಕಿದೆ ಎಂದರು.
ಹಿಂದೂ ಸಮಾವೇಶ ಸಮಿತಿ ಅಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಧರ್ಮ ಭವಿಷ್ಯದ ಪೀಳಿಗಿಗೆ ಆಚಾರ, ವಿಚಾರ, ಸಂಸ್ಕೃತಿಗಳನ್ನು ಬಳುವಳಿಯಾಗಿ ನೀಡುವುದರ ಮೂಲಕ ಹಿಂದೂ ಸಮಾಜವನ್ನು ಸುಭದ್ರವಾಗಿ ನಿರ್ಮಿಸಲು ಕಂಕಣಬದ್ಧರಾಗಬೇಕಿದೆ. ಹಿಂದೂ ಸಮಾವೇಶವು ಯಾವುದೇ ಧರ್ಮದ ವಿರುದ್ಧ ಸಾರುವ ಸಮಾವೇಶವಲ್ಲ, ನಮ್ಮ ಸನಾತನ ಹಿಂದೂ ಧರ್ಮದ ಆಚಾರ, ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ, ಹಿಂದೂ ಸಮುದಾಯದ ನೆಲೆಗಟ್ಟಿನಂತೆ ನಮ್ಮ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶವಾಗಿದೆ. ಈ ಸಮಾವೇಶದಲ್ಲಿ ಪಕ್ಷಾತೀತವಾಗಿ ನಾವುಗಳು ಹಿಂದೂ ಎಂಬ ಮನೋಭಾವನೆಯಿಂದ ಪಾಲ್ಗೊಳ್ಳಬೇಕು ಹಿಂದೂ ಎಂಬುದು ಒಂದು ಬೃಹತ್ ಕುಟುಂಬವಾಗಿದೆ ಇದರಲ್ಲಿ ಎಲ್ಲಾ ಹಿಂದೂ ಸಮುದಾಯದ ಎಲ್ಲಾ ಜಾತಿಯವರು ನಾವೆಲ್ಲ ಒಂದು ಎಂಬ ಘೋಷ ವಾಕ್ಯದೊಂದಿಗೆ ಸಾಗಬೇಕು ಎಂದರು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಪವಾಡಿ ಹನುಮಂತಪ್ಪ ಮಾತನಾಡಿ, ಹಿಂದೂಗಳು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಬೇಕು, ಚುನಾವಣಾ ವೇಳೆ ರಾಜಕೀಯ ಪಕ್ಷದ ನಡೆಯುವುದು ಸಹಜ. ಆದರೆ ಹಿಂದುತ್ವದ ನಡೆ ಒಂದೆಡೆ ಎಂಬುದು ಶಾಶ್ವತವಾಗಿರಬೇಕು ಎಂದರು.
ನAದಿಪುರ ಮಠದ ಡಾ.ಮಹೇಶ್ವರ ಸ್ವಾಮಿಗಳು ಆಶಿರ್ವಚನ ನೀಡಿ ಈ ಬಾರಿಯ ಹಿಂದೂ ಸಮಾವೇಶ ಬೇರೆ ಸಮುದಾಯಕ್ಕೆ ಮಾದರಿಯಾಗಿರುವಂತೆ ಪೂರ್ವತಾಯಾರಿ ನಡೆಯಬೇಕಿದೆ. ಸಮಾವೇಶಕ್ಕಿಂತ ಹಿಂದೂಗಳು ಹೇಗಿರಬೇಕು, ಎನು ಮಾಡಬೇಕು ಎಂಬುದರ ಮಾರ್ಗಸೂಚಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಇದೇ ವೇಳೆ ಮುಖಂಡ ಬಲ್ಲಾಹುಣಿಸಿ ರಾಮಣ್ಣ, ರೆಡ್ಡಿ ಸಮಾಜದ ಅಧ್ಯಕ್ಷ ಬಸವರಾಜ ರೆಡ್ಡಿ, ಬಣಜಿಗ ಸಮಾಜದ ಅಧ್ಯಕ್ಷ ರಾಚಪ್ಪ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬದಾಮಿ ಮೃತ್ಯುಂಜಯ, ಹಿರಿಯರಾದ ಹೆಗ್ಡಾಳ ರಾಮಣ್ಣ ಮಾತನಾಡಿದರು.
ಸಭೆಯಲ್ಲಿ ಪುರಸಭೆ ಸದಸ್ಯೆ ಕಮಲಮ್ಮ.ಆರ್.ಶಿವಮೊಗ್ಗ ಸಲಹೆ ನೀಡಿ ಸಮಾವೇಶದಂದು ಹಿಂದೂಗಳ ಸಂಸ್ಕೃತಿ ಬಿಂಬಿಸುವ ವಸ್ತç ಸಂಹಿತೆ ನಮ್ಮದಾಗಿರಲಿ. ಮಹಿಳೆಯರು ಕಡ್ಡಾಯವಾಗಿ ಸೀರೆ ಅಥವಾ ದುಪ್ಪಟ್ಟ ಸಹಿತ ಚೂಡಿದಾರ ಧರಿಸಿ, ಪುರುಷರು ಶ್ವೇತವರ್ಣದ ಅಂಗಿ ಮತ್ತು ಪಂಜೆಗಳನ್ನು ಧರಿಸಿ ಭಾಗವಹಿಸುವಂತೆ ಸೂಚಿಸಿದರು.
ವೇದಿಕೆಯಲ್ಲಿ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಹಿಂದೂ ಸಮಾವೇಶ ಸಮಿತಿಯ ಉಪಾಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ಕಾರ್ಯದರ್ಶಿ ಎಂ.ಅಜ್ಜಯ್ಯ, ನವೀನ್ ಕುಮಾರ್, ಕನಕಪ್ಪ, ಪ್ರಮುಖರಾದ ರಾಘವೇಂದ್ರ ಕೋರಗಲ್, ಅನಿಲ್ ಚಿದ್ರಿ, ಸಂಜೀವ್ ರೆಡ್ಡಿ, ಕಾಂತಿಲಾಲ್ ಜೈನ್, ಅಂಬಾಡಿ ನಾಗರಾಜ, ಮಡಿವಾಳರ ರಾಮಣ್ಣ, ಸಂಚಿ ಶಿವಕುಮಾರ್, ಜೋಗಿ ಹನುಮಂತಪ್ಪ, ಸುಭಾಷ್ ಬಾರೆಂಗಳ್, ಎಸ್.ಕೊಟ್ರೇಶ್, ಆರ್.ಕೇಶವರೆಡ್ಡಿ, ಅವಿನಾಶ್ ಜಾಧವ್, ವೀರೇಶ್ ಉಪ್ಪಾರ ಸೇರಿದಂತೆ ವಿವಿಧ ಸಮುದಾಯದ ಪದಾಧಿಕಾರಿಗಳು ಭಾಗವಹಿಸಿದ್ದರು.


Comments

Leave a Reply

Your email address will not be published. Required fields are marked *