ಪ್ರಯಾಣಿಕರಿಂದ ರಶ್ ಆಗಿದ್ದ ಕೆಕೆಆರ್‌ಟಿಸಿ ಬಸ್ಸು ಮರಕ್ಕೆ ಡಿಕ್ಕಿ : ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಾಯ.

ಪ್ರಯಾಣಿಕರಿಂದ ರಶ್ ಆಗಿದ್ದ ಕೆಕೆಆರ್‌ಟಿಸಿ ಬಸ್ಸು ಮರಕ್ಕೆ ಡಿಕ್ಕಿ : ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಾಯ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).

ಪ್ರಯಾಣಿಕರು ತುಂಬಾ ರಶ್ ಇದ್ದ ಕೆಕೆಎಸ್ ಆರ್ ಟಿಸಿ ಬಸ್ ಬೈಕನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ‌ನಡೆದಿದೆ.

ಕೂಡ್ಲಿಗಿ ಘಟಕಕ್ಕೆ ಸೇರಿದ ಬಸ್ ಬೆಳಿಗ್ಗೆ ತಾಲೂಕಿನ ಕಸಾಪುರ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ ಸಾಗರ ಡಾಬಾ ಬಳಿ ಬೈಕನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಬಲ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ಸಿನ ಮುಂದಿನ ಬಲ ಭಾಗ ಸಂಪೂರ್ಣ ಹಾನಿಯಾಗಿದೆ. ಇದರಿಂದ ಚಾಲಕ  ಶಶಿಧರ ಅವರ ಬಲಗಾಲು ಮುರಿದಿದ್ದು, ನಿರ್ವಾಹಕ  ಪಾಟೀಲ ಅವರ ಮುಖಕ್ಕೆ ಪೆಟ್ಟು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ವಿದ್ಯಾರ್ಥಿಗಳು ಸೇರಿದಂತೆ ಬಸ್ಸಿನಲ್ಲಿ 62 ಜನರಿದ್ದರು ಎನ್ನಲಾಗಿದೆ. ಅವರಲ್ಲಿ ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಕೂಡ್ಲಿಗಿ ಠಾಣೆಯ ಸಿಪಿಐ ಪ್ರಲ್ಹಾದ್ ಆರ್ ಚನ್ನಗಿರಿ, ಪಿಎಸೈ ಸಿ. ಪ್ರಕಾಶ ಸ್ಥಳಕ್ಕೆ ಭೇಟಿ ನೀಡಿ ಗಾಯಳುಗಳನ್ನು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಜಯನಗರ ಎಸ್ಪಿ ಎಸ್.ಜಾಹ್ನವಿ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.


Comments

Leave a Reply

Your email address will not be published. Required fields are marked *