ಹಂಪಿ ಉತ್ಸವ : ಹೆಣ್ಣು ಭ್ರೂಣ ಉಳಿಸುವ ಸಂದೇಶ ಸಾರಿದ ರಂಗವಲ್ಲಿ. ರಂಗೋಲಿ ಮೂಲಕ ಸಾಮಾಜಿಕ ಜಾಗೃತಿ.

ಹಂಪಿ ಉತ್ಸವ : ರಂಗೋಲಿ ಮೂಲಕ ಸಾಮಾಜಿಕ ಜಾಗೃತಿ
ಹೆಣ್ಣು ಭ್ರೂಣ ಉಳಿಸುವ ಸಂದೇಶ ಸಾರಿದ ರಂಗವಲ್ಲಿ

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ಹಂಪಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯಿತು. “ಹೆಣ್ಣು ಭ್ರೂಣ ಉಳಿಸಿ” ಎಂಬ ರಂಗವಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಹಾಗೂ ಭ್ರೂಣಹತ್ಯೆ ತಡೆಯುವ ಸಂದೇಶ ಸಾರಿತು.
ವಿಜಯನಗರ ಸಾಮ್ರಾಜ್ಯದ ವರಾಹ ಲಾಂಛನದ, ಶ್ರೀ ಕೃಷ್ಣದೇವರಾಯ , ಶಿವಲಿಂಗ, ಸಿಂಹ ಸೇರಿದಂತೆಬಣ್ಣ-ಬಣ್ಣದ ರಂಗೋಲಿ ಚಿತ್ತಾರಗಳು ಹಂಪಿಯ ಉತ್ಸವದ ಮೆರಗನ್ನು ಹೆಚ್ಚಿಸಿದವು. ರಂಗೋಲಿ ಸ್ಪರ್ಧೆಯಲ್ಲಿ ಒಟ್ಟು 41 ಮಹಿಳಾ ಸ್ಪರ್ದಿಗಳು ಭಾಗವಹಿಸಿದ್ದರು. ಬಗೆ-ಬಗೆಯ ರಂಗೋಲಿ ಚಿತ್ತಾರಗಳು ಹಬ್ಬದ ವಾತಾವರಣವನ್ನು ಸೃಷ್ಠಿಸಿ ಹಂಪಿ ಉತ್ಸವಕ್ಕೆ ಕಳೆ ತಂದವು.

 


Comments

Leave a Reply

Your email address will not be published. Required fields are marked *