ಸಂಸ್ಕಾರ, ಸಂಸ್ಕೃತಿ ಮತ್ತು ಸಮಾನತೆ ಬುನಾದಿ ಹಿಂದೂ ಧರ್ಮ ಹಿಂದೂ ಸಮಾವೇಶಕ್ಕೆ ಪಕ್ಷಾತೀತವಾಗಿ ಒಗ್ಗಟ್ಟಾಗಿ ಶೋಭಾಯಾತ್ರೆ ಯಶಸ್ವಿಗೊಳಿಸಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿಕೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ. ‘ವಸುಧೈವ ಕುಟುಂಬಕA’ ಎಂಬ ಧ್ಯೇಯ ವ್ಯಾಕ್ಯದಲ್ಲಿ ಇಡೀ ಜಗತ್ತಿಗೆ ಸಂದೇಶ ಸಾರಿದ ಹಿಂದೂ ಧರ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಸಮಾನತೆ ಬುನಾದಿಯಾಗಿದೆ. ಹಿಂದೂ ಸಮಾವೇಶ ಹಬ್ಬದಂತೆ ಆಚರಿಸಬೇಕಿದೆ. ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶದಲ್ಲಿ ಆಚಾರ, ವಿಚಾರ, ಗಟ್ಟಿಗೊಳಿಸುವ ಉದ್ದೇಶಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು. ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಹಿಂದೂ ಸಮಾವೇಶ ಸಮಿತಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಪಟ್ಟಣದಲ್ಲಿ ಶನಿವಾರ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು, ಯುವಕರು ಮತ್ತು ಹಿಂದೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸ್ವಯಂಪ್ರೇರಿತವಾಗಿ ಭಾಗವಹಿಸಬೇಕಿದೆ. ಹಳೇಊರಿನಿಂದ ಆರಂಭವಾಗಲಿರುವ ಶೋಭಾಯಾತ್ರೆಯಲ್ಲಿ ವಿವಿಧ ವಾದ್ಯಕಲಾತಂಡಗಳು, ಭಾರತ ಮಾತೆಯ ಭಾವಚಿತ್ರ…
Read More