ಡಣಾಪುರ ಕ್ರಾಸ್ ಬಳಿ ಹೈವೇನಲ್ಲಿ ಭೀಕರ ಸರಣಿ ಅಪಘಾತ ! ಸ್ಥಳದಲ್ಲೇ ಸಾವು – ನೋವು ಜವರಾಯನ ಅಟ್ಟಹಾಸ.

Spread the love

 

ಬ್ರೇಕಿಂಗ್ ನ್ಯೂಸ್ : ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ ಸರಣಿ ಅಪಘಾತ. 

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ). 

ಲಾರಿ ಚಾಲಕನ ಅಜಾಗರೂಕತೆಯಿಂದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಡಣಾಪುರ ಕ್ರಾಸ್ ಬಿಎಂಎಂ ಕಾರ್ಖಾನೆ ಎದರುಗಡೆ ಭೀಕರ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲಿ ಸಾವು ನೋವು ನಡೆದ ದುರ್ಘಟನೆ ಏಪ್ರಿಲ್ 19 ರಂದು ನಡೆದಿದೆ.

ಸ್ಥಳದಲ್ಲೇ ನಾಲ್ಕರಿಂದ ಏಳು ಜನರು ಮೃತಪಟ್ಟಿರುವ ಶಂಕೆ ಇದೆ. ಸುಮಾರು ಹತ್ತಕ್ಕೂ ಹೆಚ್ಚು ಜನರನ್ನು ಗಂಭೀರ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.

ಹೊಸಪೇಟೆಯ ಹೊರವಲಯದ ಟನಲ್ ನಿಂದ ಡಣಾಪುರದವರೆಗೆ ಬೈಕ್, ಕಾರು, ಬಸ್ ಗೆ ಹೊಡೆದುಕೊಂಡು ಹೋಗಿರೋ ಲಾರಿ ಚಾಲಕ ಸದ್ಯಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೊಸಪೇಟೆ ಮಾರ್ಗದಿಂದ ಚಿತ್ರದುರ್ಗ ಕಡೆ ಸಾಗುತ್ತಿದ್ದ ಬೆಳ್ಳುಳ್ಳಿ ತುಂಬಿದ ಲಾರಿ ನೆಲಕ್ಕುರುಳಿದೆ. ಕಾರೊಂದು ಅಪ್ಪಚ್ಚಿ ಆಗಿದೆ. ಸಾರಿಗೆ ಬಸ್ ನುಜ್ಜುಗುಜ್ಜಾಗಿದೆ.

ಪಲ್ಟಿಯಾಗಿರುವ ಲಾರಿ ಕೆಳಭಾಗದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಭೀಕರ ಅಪಘಾತದಲ್ಲಿ ಅನೇಕರು ಭಯಭೀತರಾಗಿದ್ದಾರೆ.

ಸ್ಥಳಕ್ಕೆ ವಿಜಯನಗರ ಜಿಲ್ಲಾ ಎಸ್ಪಿ ಜಾಹ್ನವಿ.ಎಸ್, ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಸೇರಿ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು, ಎನ್ಎಚ್ಎಐ ಸಿಬ್ಬಂದಿಗಳು ಕ್ರೇನ್ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತ ಸ್ಥಳದಲ್ಲಿ ಜನದಟ್ಟಣೆ ಸೇರಿ ಕೆಲಕಾಲ ಹೈವೇ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ.

Leave a Reply

Your email address will not be published. Required fields are marked *