ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಏ.19 ರಂದು ಪ್ರಕೃತಿ ಚಿಕಿತ್ಸಾ ಶಿಬಿರ.

Spread the love

 

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಏ.19 ರಂದು ಪ್ರಕೃತಿ ಚಿಕಿತ್ಸಾ ಶಿಬಿರ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಪತಂಜಲಿ ಯೋಗ ಸಮಿತಿ ಮತ್ತು ಹರಪನಹಳ್ಳಿಯ ಜನನಿ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಏ.19 ರಂದು ಬೆ.10 ಗಂಟೆಗೆ ವಿದ್ಯಾಕೇಂದ್ರದ ಆವರಣದಲ್ಲಿ ಉಚಿತವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು ಉದ್ಘಾಟಿಸಲಿದ್ದಾರೆ. ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೆಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯಲ್ಲಿ ಸೋಮನಗೌಡ್ರು, ಪತಂಜಲಿ ಯೋಗ ಶಿಕ್ಷಣ ಸಮಿತಿ ತಾಲೂಕು ಪ್ರಭಾರಿ ವೇದಾವತಿ ಉಪ್ಪಿನ, ಪುರಸಭೆ ಸದಸ್ಯೆ ಕಮಲಮ್ಮ ಶಿವಮೊಗ್ಗ, ಪತಂಜಲಿ ಆರೋಗ್ಯ ಕೇಂದ್ರದ ಡಾ.ಪೂರ್ಣಿಮಾ, ಜನನಿ ಸಮೂಹ ಸಂಸ್ಥೆಗಳ ಮಾಧ್ಯಮ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಉಪಸ್ಥಿತರಿರಲಿದ್ದಾರೆ.

ಶಿಬಿರದಲ್ಲಿ ಉಚಿತವಾಗಿ ವೈದ್ಯಕೀಯ ಸಮಾಲೋಚನೆ, ಆಹಾರ ಸಲಹೆ, ರಕ್ತದಲ್ಲಿನ ಸಕ್ಕರೆ ಅಂಶ ತಪಾಸಣೆ, ಪ್ರಕೃತಿ ಚಿಕಿತ್ಸೆ, ಯೋಗ ಸಮಾಲೋಚನೆ, ಅಕ್ಯುಪಂಕ್ಚರ್, ಬೊಜ್ಜು, ಬೆನ್ನು ನೋವು, ಸ್ರ್ತೀರೋಗ, ಕೀಲು ನೋವು, ಅಧಿಕ ರಕ್ತದೊತ್ತಡ, ಮಧುಮೇಹ, ಹೈಪರ್ಟೆನ್ಷನ್, ಥೈರಾಯ್ಡ್, ಗ್ಯಾಸ್ಟ್ರೈಟೀಸ್, ಮೈಗ್ರೇನ್‌, ನಿದ್ರಾಹೀನತೆ, ಉದ್ವಿಗ್ನತೆ, ಪಾರ್ಶ್ವವಾಯು, ಸ್ಟಾಂಡಿಲೈಟಿಸ್ ಸೇರಿದಂತೆ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊ.9449177677, 8317363097 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *