Last Updated on March 2, 2026 by ASHOK UPPAR
ಮಾ.2 ರಂದು ರಾತ್ರಿ ಕಾಮದಹನ, ಮಾ.3 ರಂದು ಹೋಳಿ ಹಬ್ಬ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಇಂದು ಮಾ.2 ರಂದು ರಾತ್ರಿ 12 ಗಂಟೆಗೆ ಸಂಪ್ರದಾಯ ಬದ್ದವಾಗಿ ಕಾಮದಹನ ಕಾರ್ಯಕ್ರಮ ಜರುಗಲಿದೆ. ಮಾ.3 ರಂದು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ಬಣ್ಣದ ಹೋಕುಳಿ ಜರುಗಲಿದೆ ಎಂದು ರಾಮನಗರದ ಮುಖಂಡ ಸೆರೆಗಾರ ಹುಚ್ಚಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರತಿ ವರ್ಷದಂತೆ ರಾಮನಗರ ಸಹೋದರರಿಂದ ಆಚರಿಸುವ ಕಾಮದಹನ ಕಾರ್ಯಕ್ರಮ ಮಾ.2 ರಂದು ಸೋಮವಾರ ರಾತ್ರಿ 12 ಗಂಟೆಗೆ ರಾಮನಗರದ ತೇರು ಬೀದಿಯಲ್ಲಿ ನಡೆಯುವ ಕಾಮದಹನ ಆಚರಣೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಭಾಗವಹಿಸುವಂತೆ ಕರೆ ನೀಡಿದ್ದಾರೆ. ಕಾಮದಹನದ ಬಳಿಕ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಷ್ಟಲ್ಲದೇ ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿ ಮತ್ತು ಕೆವಿಒಆರ್ ಕಾಲೋನಿಯಲ್ಲಿ ಸಹ ಕಾಮದಹನ ಮತ್ತು ಬಣ್ಣದೋಕುಳಿಯನ್ನು ಇದೇ ದಿನಾಂಕದಂದೇ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.
