Last Updated on March 2, 2026 by ASHOK UPPAR
ಮಾ.3 ರಂದು 9 ನೇ ವರ್ಷದ ಅದ್ದೂರಿ ಕಲರ್ಸ್ ವಿತ್ ಕಾರಂಜಿ ಕಾರ್ಯಕ್ರಮ. ಡಿಜೆ ಸೌಂಡ್ ವಿತ್ ರೈನ್ ಡ್ಯಾನ್ಸ್ ಕೂಡ್ಲಿಗಿ ಸರ್ಕಲ್ ನಲ್ಲಿ ಆಯೋಜನೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಟ್ಟಣದ ಕೂಡ್ಲಿಗಿ ಸರ್ಕಲ್ ನಲ್ಲಿ ಮಾ.03 ರಂದು ಮಂಗಳವಾರ ಬೆ.8:30 ರಿಂದ 12 ಗಂಟೆಯವರೆಗೆ 9ನೇ ವರ್ಷದ ಅದ್ದೂರಿ ಕಲರ್ಸ್ ವಿತ್ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರಂಜಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಸಹ ಕೂಡ್ಲಿಗಿ ಸರ್ಕಲ್ ನಲ್ಲಿ ಕಲರ್ಸ್ ವಿತ್ ಕಾರಂಜಿ ಬಳಗ ಮತ್ತು ಲಾಕ್ ಡೌನ್ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಡಿಜೆ ಸೌಂಡ್ ಮತ್ತು ರೈನ್ ಡ್ಯಾನ್ಸ್ ವ್ಯವಸ್ಥೆಯನ್ನು ಕಲ್ಪಿಸಲು ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಯುವತಿಯರು, ಮಕ್ಕಳು ಬಂದು ಭಾಗವಹಿಸಿ ಬಣ್ಣದೋಕಳಿ ಹಬ್ಬವನ್ನು ಸಡಗರದಿಂದ ಸಂಭ್ರಮಿಸಬೇಕು. ಯುವತಿಯರಿಗೆ ಪ್ರತ್ಯೇಕವಾಗಿ ಬ್ಯಾರಿಕೇಡ್ ಹಾಕುವ ಮೂಲಕ ಸ್ಥಳಾವಕಾಶ ಕಲ್ಪಿಸಿದೆ. ಎಲ್ಲರ ಸಹಕಾರದಿಂದಾಗಿ 8 ವರ್ಷಗಳು ಯಶಸ್ವಿಯಾಗಿ ಪೂರೈಸಿ 9 ವರ್ಷದ ಆಚರಣೆ ಆಯೋಜಿಸಿದೆ ಹಗರಿಬೊಮ್ಮನಹಳ್ಳಿ ನಿವಾಸಿಗಳು ಸಹಕಾರ ನೀಡುವ ಮೂಲಕ ಈ ಬಾರಿ ಯಶಸ್ವಿಗೊಳಿಸಲು ಕಲರ್ಸ್ ವಿತ್ ಕಾರಂಜಿ ಬಳಗದ ಎಲ್ಲಾ ಸ್ನೇಹಿತರ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸ್ ಇಲಾಖೆ ಮೆಚ್ಚುಗೆ : ಸತತವಾಗಿ 9 ವರ್ಷಗಳಿಂದ ಕಲರ್ಸ್ ವಿತ್ ಕಾರಂಜಿ ಬಳಗ ವಿಶೇಷವಾಗಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಒಂದು ಸ್ಥಳದಲ್ಲಿ ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ಬಣ್ಣದ ಹಬ್ಬವನ್ನು ಆಯೋಜಿಸುವ ಮೂಲಕ ಎಲ್ಲಾ ಯುವಕರು ಒಟ್ಟಿಗೆ ಸೇರಲು ಸಂಭ್ರಮಿಸಲು ಅವಕಾಶ ನೀಡುತ್ತಿದ್ದಾರೆ. ಇವರ ಪ್ರಯತ್ನದಿಂದಾಗಿ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಹಬ್ಬವನ್ನು ಸೌಹಾರ್ದ ಮತ್ತು ಶಾಂತಿಯುತವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
