Last Updated on February 23, 2026 by ASHOK UPPAR
ಪ್ಯಾರಾ ಈಜುಗಾರ ಗೋಪಿಚಂದ್ಗೆ ಅಂತರಾಷ್ಟ್ರೀಯ ಬೆಳ್ಳಿ ಪದಕ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಬಳ್ಳಾರಿ.
ಬಳ್ಳಾರಿಯ ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಲಭಿಸಿದೆ. 2026 ರ ಫೆ.16 ರಿಂದ 21 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಪ್ಯಾರಾ ಈಜು ಸ್ಪರ್ಧೆ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಬಳ್ಳಾರಿಯ ಗೋಪಿಚಂದ್ ಅವರು ಭಾಗವಹಿಸಿದ್ದರು.
ಅವರು, 4×100 ಮೀಟರ್ ಮಿಡ್ ರಿಲೇಯಲ್ಲಿ ಎರಡನೇ ಸ್ಥಾನ ಅಲಂಕರಿಸುವ ಮೂಲಕ ಅಂತರಾಷ್ಟ್ರೀಯ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದು ಬಳ್ಳಾರಿ ಜಿಲ್ಲೆಯ ಪ್ಯಾರಾ ಸ್ವಿಮ್ಮರ್ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮೊದಲನೆಯ ಪದಕವಾಗಿದೆ. ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ಕೋಚ್ಗಳಾಗಿ ರಜನಿ ಲಕ್ಕಾ ಮತ್ತು ಶರತ್ ಗಾಯಕ್ವಾಡ್ ಅವರು ತರಬೇತಿ ನೀಡಿದ್ದರು.
ಈ ಸಾಧನೆಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್.ಡಿ.ಪನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಸೇರಿ ಜಿಲ್ಲಾಡಳಿತದಿಂದ ಅಭಿನಂದಿಸಲಾಗಿದೆ.
